Wednesday, November 7, 2007

ನನಗೆ ಸಿಕ್ಕ ಕೆಲವು ಪಂಚಿಂಗ್ ಹನಿಗವನ ಗಳು

ತಲೆ ತಲಾಂತಾರ
ಚಿತ್ರರಂಗದ ತಲೆ ತಲಾಂತಾರ
ರಾಜಣ್ಣ - ಶಿವಣ್ಣ
ರಾಘಣ್ಣ
ರಾಜಕೀಯದ ತಲೆ ತಲಾಂತಾರ
ದೇವಣ್ಣ - ಕುಮಾರಣ್ಣ,
ರೇವಣ್ಣ

ನನಗೇನು ಕಮ್ಮಿ
ಮುಖ್ಯಮಂತ್ರಿ ಯಾಗಲು ನನಗೇನಾಗಿದೆ ಕಮ್ಮಿ
ಆದರೆ ಒಪ್ಪಬೇಕಲ್ಲ
ಗೌಡ ಮತ್ತು ಅವರ ಮಗ ಕುಮ್ಮಿ

ಗ್ರಾಮ ವಾಸ್ತವ್ಯ
ದಿನಾ ಹೆಂಡತಿಯ ಕೈ ಅಡುಗೆ ಉಂಡು ಬೇಜಾರಣ್ಣ
ಆದಕ್ಕೆ ತಾನೇ ಗ್ರಾಮ ವಾಸ್ತವ್ಯ
ಮಾಡೋದು ಕುಮಾರಣ್ಣ

ರಾಜಕೀಯ ನಿವೃತಿ
ರಾಜಕೀಯ ದಿಂದ ಗೌಡರು ರಿಟೇರ್
ಆಗುತ್ತಾ ಆಗುತ್ತಾ ಸುಸ್ತದರು !
ಕೊನಗೆ ರೆಟೈರಾದವರು
ಗೌಡರಲ್ಲ ಮತದರಾರು!!

ಯಡಿಯೂರಪ್ಪ ರೆಡೀ
ಕರ್ನಾಟಕದ
ಮುಖ್ಯಮಂತ್ರಿ ಯಾಗಲು
ಯಡಿಯೂರಪ್ಪ ರೆಡೀ
ಅದಕ್ಕೆ ಆಶೀರ್ವಾದ
ಮಾಡಬೇಕು
ಕುಮಾರಣ್ಣನ ಡ್ಯಾಡೀ

ಸಂಗ್ರಹ :ನೆಟ್
http://thatskannada.oneindia.in/nri/poem/210907mini-poems-on-HDK-DG-BSY.html

Sunday, November 4, 2007

ಕನ್ನಡ ಪೀಜೆ ಗಳು , ಟ್ರೈ ಮಾಡಿ

ಸಂಗ್ರಹ :ನೆಟ್

ಕ್ರೀಮ್ ಬಿಸ್ಕಟ್ ನಲ್ಲಿ ಕ್ರೀಮ್ ಇರುತ್ತೆ ,ಆಧ್ರೆ....ಬೆಣ್ಣೆ ಬಿಸ್ಕಟ್ ನಲ್ಲಿ ಬೆಣ್ಣೆ ಇರುತ್ತಾ ? !!!

ನೀನು ಬಸ್ಸು ಹತ್ತೂದ್ರನು ...ಬಸ್ಸು ನಿನ್ನ ಮೇಲೆ ಹತ್ತೂದ್ರನು ಟಿಕೆಟ್ ತೊಗಳ್ಲೋದು ನೀನೆ !

ಟಿಕೆಟ್ ತಗೊಂಡು ಒಳಗೆ ಹೋಗೋದು "ಸಿನಿಮಾ ಥಿಯೇಟರ್"....ಒಳಗೆ ಹೋಗಿ ಟಿಕೆಟ್ ತಗೊಳೋದು"ಆಪರೇಶನ್ ಥಿಯೇಟರ್".....

ಬಸ್ಸು ಹೋದ್ರೆ ಬಸ್ಸುಸ್ಟ್ಯಾಂಡ್ ಅಲ್ಲೇ ಇರುತ್ತೆ , ಆಧ್ರೆ ಸೈಕಲ್ ಹೋಧ್ರೆ ಸೈಕಲ್ ಸ್ಟ್ಯಾಂಡ್' ಜೊತೆಗೆ ಹೋಗುತ್ತೆ।

Saturday, November 3, 2007

ರಾಮ ಸೇತು

ಒಂದು ದಿನ ಶ್ರೀ ರಾಮ ಬಹಳ ಬೇಜಾರಿನಿಂದ ತನ್ನ ಪರಮ ಭಕ್ತ ಹನುಮಂತ ನ ಕರೆದು ಹೇಳ್ತಾನೇ। ನೋಡೋ ನೀನು ಸಾವಿರಾರು ಶತಮಾನ ಗಳ ಮುಂಚೆ ಕಟ್ಟಿದ ರಾಮ ಸೇತು ಎಷ್ಟು ಚನ್ನಾಗಿ ಇದೆಯಪ್ಪ , ಯಾವ್ದೇ ಮಳೆ ಗಾಳಿಗು ಏನು ಆಗಿಲ್ಲ . ಆಂದ್ರ ಪ್ರದೇಶದಲ್ಲಿ ಯಾವ್ದೋ ಗ್ಯಾಮನ್ ಅನ್ನೋ ಕಂಪನೀ ಕಟ್ಟಿರೋ ಬ್ರಿಡ್ಜ್ ಅಂತೆ ,ಪಾಪ ಅದ್ರ ಕಂಬಕ್ಕೆ ಪೋಸ್ಟರ್ ಬ್ಯಾನರ್ ಹಾಕ್ಕೋ ಮುಂಚೆ ನೇ ಬಿದ್ದು ಹೋಯ್ತ್ತಂತೆ !!!!. ಆಗ ಹನುಮಂತ ಭಕ್ತಿಯಿಂದ ಜೈ ಶ್ರೀ ರಾಮ ,ಅದು ಎಲ್ಲ ನಿನ್ನ ಭಕ್ತಿ ಯ ಶಕ್ತಿ ಯ ಫಲ , ನಿನ್ನ ಅಪ್ಪಣೆ ಇಲ್ಲ ಅಂದ್ರೆ ಒಂದು ಕಡ್ಡಿ ನು ನಿಲ್ಲೊದಿಲ್ಲ. ನಾವು ಸುಮ್ಮನೇ ನಿನ್ನ ಹೆಸ್ರುನ್ನ ಕಲ್ಲಿನ ಮೇಲೆ ಬರದು ನೀರಲ್ಲಿ ಹಾಕದ್ದು ಮಾತ್ರ ,ಯಾವ ಟಿಸ್ಕೊ ಸ್ಟೀಲ್ ,ಲಕ್ಸ್ಮಿ ಪುತ್ರ ಮಿತ್ತಲ್ ಕಬ್ಬಿಣ,ಅಥವಾ ಅಂಬುಜ ಸೆಮೆಂಟ್ ನ ಯೂಸ್ ಮಾಡಿಲ್ಲ್ಲ. ಆದು ಇರ್‍ಲಿ ಅದನ್ನ ಈಗ ಯಾಕೆ ಕೇಳ್ತಾ ಎದ್ದೀರಾ ಪ್ರಭು... ತುಂಬಾ ಓಲ್ಡ್ ಸ್ಟೋರೀ ಅಲ್ವಾ ಇದು.।ಆಗ ರಾಮ ಅದು ಏನಕ್ಕೆ ಅಂದ್ರೆ ಕೆಳಗಡೆ ನನ್ನ ಬ್ರಿಡ್ಜ್ ಗೆ ಸಲ್ಪ ಪ್ರಾಬ್ಲಮ್ ಆಗಿದೆ ಮಾರಾಯ ಯಾರೋ ಸಲ್ಪ ಜನ ಅದನ್ನ ಬೀಳಿಸಿ ಒಂದು ಸುರಂಗ ಮಾಡ್ತರ್ ಅಂತೆ। ಈ ಪ್ರಾಜೆಕ್ಟ್ ನಲ್ಲಿ ಸಿಕ್ಕಾಬಟ್ಟೆ ಕಮಿಶನ್ ಸಿಕ್ಕುತ್ತಾಂತೆ, ಮೊದ್ದ್ಲು ನನ್ನ ಬ್ರಿಡ್ಜ್ ಬೀಳಿಸಕ್ಕೆ ಆಮೇಲೇ ಹೊಸ ಸುರಂಗ ಮಾಡೋಕ್ಕೆ ಎರಡು ಕೆಲ್ಸಾ ದಲ್ಲೂ ಸಿಕ್ಕಾಬಟ್ಟೆ ದುಡ್ಡು ತಿಂತಾರೆ !!. ಆಗ ಹನುಮಂತ ಅಯ್ಯೊ ನಾವು ಏನು ಮಾಡೋಣ ಇಗ ಭೂಮಿ ಗೆ ಹೋಗಿ ಬ್ರಿಡ್ಜ್ ನಮ್ಮ್ ದು ಅಂತ ಕ್ಲೇಮ್ ಮಾಡೋಣ ಅಲ್ವಾ . ಆಗ ರಾಮ ಹನುಮಂತ ನಿನಗೆ ಗೊತ್ತಿಲ ಕೆಳಗಡೆ ತುಂಬಾ ಬದಲಾಗೆದೆ ಕಣಪ್ಪ , ನಮ್ಮ ಕಾಲದ ತರ ಇಲ್ಲ , ನಾವು ಕೆಳಗೆ ಹೋದ್ರೆ ಫರ್ಸ್ಟ್ ನಮ್ಮ ಏಜ್ ಪ್ರೊಫ್ ಗೆ ಸರ್ಟಿಫಿಕೇಟ್ ಕೊಡಿ ಅಂತಾರೆ !! , ಅಥ್ವಾ ಡ್ರೈವಿಂಗ್ ಲೈಸೆನ್ಸ್ನಾದ್ರು ಇಟ್ಕೋಬೇಕು , ಅವ್ನು ಎಲ್ಲ ಎಲ್ಲಿಂದ ತರ್ಲಿ !! ,ಮತ್ತೆ ನನ್ನ ಬರ್ತ್ ಪ್ಲೇಸ್ ಅಯೋಧ್ಯಾ ಅಂದ್ರೆ ಇನ್ನೂ ತೊಂದರೆ , ಯಾಕ್‌oದ್ರೆ ಮೊದ್ಲೆ ಅಯೋಧ್ಯಾ ಇತ್ತೊ ಇಲ್ವೋ ಅಂತ ಒಂದು ಕೇಸ್ 50 ವರ್ಷ ದಿಂದ ಸುಪ್ರೀಮ್ ಕೌರ್ಟೇನಲ್ಲಿ ನಡೀತಾ ಇದೆ !!। ಯಾರು ನಂಬಲ್ಲ ನಾನು ಹುಟ್ಟಿದು ಅಲ್ಲಿ ಅಂದ್ರೆ , ಬರ್ತ್ ಸರ್ಟಿಫಿಕೇಟ್ ತಗೋ ಬಾ ಅಂತಾರೆ.
ಮತ್ತೆ ನಾನು ಈ ತರ ಡ್ರೆಸ್ ನಲ್ಲಿ ಕೆಳಗೆ ಹೋದ್ರೆ ಇನ್ನೂ ಪ್ರಾಬ್ಲಮ್ , ಈ ಥ್ರೀ ಪಿಸು ಡ್ರೆಸ್ ನೋಡಿ ನಂಗೆ ಇರೋ ಸ್ವಲ್ಪ ಅಭಿಮಾನಿಗಳು ನಾನೇ ರಾಮ ಅಂತ ನಂಬಲ್ಲ ಏನು ಮಾಡೋ ದು ।ಆಗ ಹನುಮಂತ ನಾನೇ ಕೆಳಗಡೆ ಹೋಗಿ ಪ್ರತಿಪಾದನೆ ಮಾಡ್ತೀನಿ ನಾನೇ ಬ್ರಿಡ್ಜ್ ಕಟ್ಟಿದು ಅಂತ ನೀವು ಬೇಜಾರು ಮಾಡ್ಕೋ ಬೇಡಿ । ಆಗ ರಾಮ ನಗ್ತಾ ಹನುಮಂತ ಅದು ನೀನು ಹೇಳೋ ಅಷ್ಟು ಸುಲಭ ಇಲ್ಲ , ಆವ್ರು ಮೊದಲು ನಿನ್ನ ಬ್ರಿಡ್ಜ್ ನ ಲೇಯೌಟ್ ಪ್ಲಾನ್ , ಪ್ರಾಜೆಕ್ಟ್ ಡೀಟೇಲ್ಸ್ , ಫೈನಾನ್ಶಿಯಲ್ ಔಟ್ ಲೇ , ಮತ್ತು ಕಂಪ್ಲೀಶನ್ ಸರ್ಟಿಫಿಕೇಟ್ ಕೇಳ್ತಾರೆ , ಭಾರತ ದಲ್ಲಿ ದಾಖಲೆ ಇಲ್ಲ ಅಂದ್ರೆ ಏನನ್ನು ಓಪಲ್ಲ ಕಣಪ್ಪ । ನಿನಗೆ ಕೆಮ್ಮು ಅಂದ್ರೂ ಡಾಕ್ಟರ್ ಸರ್ಟಿಫಿಕೇಟ್ ಕೊಡೋ ವರಗೆ ಯಾರು ನಂಬಲ್ಲ ಇದು ಸಂಕೀರ್ಣ ಸಿಸ್ಟಮ್ ಕಣಪ್ಪ । ಆಗ ಹನುಮಂತ ನಂಗೆ ಇದೆಲ್ಲ ಅರ್ಥ ಆಗಲ್ಲ , ಇಗ ನಾವು ಮತ್ತೆ ರಾಮಾಯಣ ನ ಆಕ್ಟ್ ಮಾಡಕ್ಕೆ ಆಗುತ್ತಾ !! ಇವರ ಡಾಕ್ಯುಮೆಂಟ್ಸ್ ಗೋಸ್ಕರ? ,, ದೆವ್ರೆ ಏನು ಕಾಲ ಬಂತಪ್ಪ . ಆಗ ರಾಮ ನಗ್ತಾ ಹನುಮಂತ ಈಗ ಅ ರಾಮಾಯಣ ನ ಆಕ್ಟ್ ಮಾಡೂಡು ತುಂಬಾ ಕಷ್ಟ.
ರಾಮಾಯಣದ ಟರ್ನಿಂಗ್ ಪಾಯಂಟ್ ಆದ ಮರೀಚ ನೇ ಬರೊಕ್ಕೆ ಓಪಲ್ಲ ಅವನಿಗೆ ಸಾಲ್ಮನ್ ಖಾನ್ ದೇ ದಿಗುಲು, ಅವನ್ನ್ ನ ಜೈಲ್ ಗೆ ಹಾಕೋವರಗೆ ಅವ್ನು ಭೂಮಿ ಗೆ ಬರಲ್ಲ ವಂತೆ , ಆವ್ನು ಬಂದಿಲ್ಲ ಅಂದ್ರೆ ನಿನ್ನ ಸೀತ ಮಯ್ಯ ಜಿಂಕೆ ನೋಡ್ ದು ಹೆಂಗೆ ,ರಾವಣ ಬರ್ರೋದು ಹೆಂಗೆ , ರಾಮಾಯಣ ನೇ ಆಗೋಲ್ಲ , ಕಾಲ ಚೇಂಜ್ ಆಯ್ತಪ್ಪ . ಸಲ್ಪ ದಿನ ವೇಟ್ ಮಾಡಿ ನೋಡನ್ನ ಏನು ಆಗುತ್ತೆ ಅಂತ ಬ್ರಿಡ್ಜ್ ಕಥೆ ...
--ಜೈ ಶ್ರೀ ರಾಮ್
ಪ್ರೇರಣೆ : ಆಂಗ್ಲ ಲೇಖನ

Thursday, November 1, 2007

ಅಖಂಡ ಕರ್ನಾಟಕಕ್ಕೆ 51ನೇ ರಾಜ್ಯೋತ್ಸವದ ಸಂಭ್ರಮ


ಸಂಗ್ರಹ :ನೆಟ್
ಅಖಂಡ ಕರ್ನಾಟಕಕ್ಕೆ 51ನೇ ರಾಜ್ಯೋತ್ಸವದ ಸಂಭ್ರಮ। ಸ್ವತಂತ್ರ ಭಾರತವು ಭಾಷಾವಾರು ಪ್ರಾಂತ್ರ್ಯಗಳನ್ನು ರಚಿಸಿದ ಹಿನ್ನೆಲೆಯಲ್ಲಿ ಮೈಸೂರು ರಾಜ್ಯ 1956ರ ನವೆಂಬರ್ 1ರಂದು ಅಸ್ತಿತ್ವಕ್ಕೆ ಬಂತು। ನಂತರ ದೇವರಾಜ ಅರಸು ಸರಕಾರಾವಧಿಯಲ್ಲಿ ಮೈಸೂರು ಕರ್ನಾಟಕವೆಂದು ನಾಮಕರಣಗೊಂಡಿತು। ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಕರ್ನಾಟಕ ಕೇವಲ ಒಂದು ರಾಜ್ಯ ಮಾತ್ರವಲ್ಲ. ಅದೊಂದು ವೈವಿಧ್ಯತೆಗಳ ಸಂಗಮ. ಇಡಿ ವಿಶ್ವಕ್ಕೆ ಮಾದರಿ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ದೇಶದ ಮುಂಚೂಣಿ ರಾಜ್ಯಗಳ ಸ್ಥಾನದಲ್ಲಿದೆ ಕರ್ನಾಟಕ. ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರು ಕಟ್ಟಿದ ನಾಡಗೀತೆಯ ಸವಿ, ಕರಾವಳಿಯ ಕಡಲ ತಡಿಯಿಂದ ಹಿಡಿದು, ಸಹ್ಯಾದ್ರಿಯ ಮುಗಿಲನ್ನು ಚುಂಬಿಸಿ, ಜಗತ್ತಿನೆಲ್ಲೆಡೆ ಐಕ್ಯತೆಯನ್ನು ಪಸರಿಸಿದೆ. ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ನಮಗೆ ಹೆಮ್ಮೆಪಡಲು ಹಲವು ವಿಷಯಗಳಿವೆ. ದೇಶದ ಭೂಪಟ ಹಾಸಿ ಹುಡುಕಿದರೆ, ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ದಾಖಲಿಸಿರುವ ರಾಜ್ಯ ನಮ್ಮ ಕರ್ನಾಟಕ. ಅತ್ಯಾಧುನಿಕ ವೈಜ್ಞಾನಿಕ ಸಂಶೋಧನೆಯಿಂದ ಹಿಡಿದು, ಸಾವಿರಾರು ಜನರಿಗೆ ಅನ್ನ ನೀಡುವ ಕೃಷಿಯಲ್ಲೂ ಕರ್ನಾಟಕ ಸ್ವಾವಲಂಬನೆ ಹೊಂದಿದೆ. ರಾಜ್ಯದಲ್ಲಿ ಕೈಗೊಳ್ಳಲಾಗಿರುವ ಆರ್ಥಿಕ ಅಭಿವೃದ್ಧಿಕಾರ್ಯಗಳು ಬಡವನ ಮನೆಯಂಗಳಕ್ಕೂ ಭರವಸೆಯ ಹೊಂಗಿರಣ ಮೂಡಿಸಿದೆ. ಕಳೆದ 51 ವರ್ಷಗಳಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ರಾಜಕೀಯ ನಾಯಕರ ಭರವಸೆಯ ಭಾಷಣದ ನಡುವೆ, ನಿಜವಾದ ಪ್ರಾಮಾಣಿಕತೆಯಿಂದ ದುಡಿದ ಬೆರಳೆಣಿಕೆಯ ಅಧಿಕಾರಿ ವರ್ಗದಿಂದ ಸ್ವಾವಲಂಬಿ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಕೂಡ ಸ್ಥಾನ ಪಡೆದಿದೆ. ಆರೋಗ್ಯ, ಶಿಕ್ಷಣ, ರಾಜಕೀಯ, ಸಾಮಾಜಿಕ, ಆರ್ಥಿಕ ವಲಯಗಳಲ್ಲಿ ಹೊಸ ಬೆಳಕು ಮೂಡಿದೆ. ಕುಗ್ರಾಮದ ಕತ್ತಲಲ್ಲೂ ಮಾಹಿತಿ ತಂತ್ರಜ್ಞಾನದ ಹೊನಲು ಹರಿದಿದೆ. ಕರ್ನಾಟಕ ರಾಜ್ಯೋತ್ಸವ ದಿನದೆಂದು ನಮ್ಮ ಸಾಧಕ ಬಾಧಕಗಳ ಕುರಿತು ಚರ್ಚೆ ಮಾಡುವುದಕ್ಕಿಂತ, ರಾಜಕಾರಣಿಗಳನ್ನು ಹೀಗಳೆಯುವದಕ್ಕಿಂತ ನಮ್ಮ ರಾಜ್ಯಕ್ಕಾಗಿ ನಾವು ಮಾಡಬಹುದಾದ ಅಳಿಲು ಸೇವೆಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ ಎನಿಸುತ್ತದೆ. ನಿಧಿ ಎತ್ತದೆ, ಘೋಷಣೆ ಕೂಗದೆ, ಕರಪತ್ರ ಹಂಚದೆ, ಪ್ರಚಾರ ಬಯಸದೆ, ಸಂಘ ಕಟ್ಟದೆ, ಮತ್ತೊಬ್ಬರ ಮಾನಸಿಕ ನೆಮ್ಮದಿ ಕೆಡಿಸದೆ ಕನ್ನಡ ಸೇವೆ ಮಾಡಲು ಸಾಧ್ಯವಾಗುತ್ತದೆಯೇ? ಆ ಕುರಿತು ಚಿಂತನೆ ನಡೆಸೋಣ. ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ನಡೆಸೋಣ. ಬೆಳಗಾವಿ ಹಾಗೂ ಕಾಸರಗೋಡು ಗಡಿ ಸಮಸ್ಯೆ, ಬಳ್ಳಾರಿ ಗಣಿ ಸಮಸ್ಯೆ, ಕೊಡಗಿನ ಪ್ರತ್ಯೇಕಾ ಕೂಗು, ನಕ್ಸಲ್ ಸಮಸ್ಯೆ, ರಾಜಕೀಯ ದೊಂಬರಾಟ ಹೀಗೆ ಸಮಸ್ಯೆಗಳ ಕೊನೆ ಇಲ್ಲದ ಪಟ್ಟಿ ಏನೇ ಇರಲಿ, ಅದೆಲ್ಲವನ್ನು ಮೀರಿದ ಅಂತಃಶಕ್ತಿ ಮತ್ತು ವೈವಿಧ್ಯತೆ ಕರ್ನಾಟಕ ಮಣ್ಣಿನಲ್ಲಿದೆ. ತಮಿಳರಿಂದ ನಾವು ಭಾಷಾಭಿಮಾನ ಕಲಿಯುವ ಮಟ್ಟಿಗೆ ನಮ್ಮತನವನ್ನು ಕಳೆದುಕೊಂಡಿದ್ದೇವಲ್ಲಾ? ಆ ಜಾಗೃತಿ ನಮ್ಮಲ್ಲಿ ಬೆಳೆದರೆ ಸಾಕು. ಕರ್ನಾಟಕದ ಸೇವೆಗೆ ನಾವು ಮೊದಲ ಕೈಜೋಡಿಸಿದಂತೆ. ನಾವಾಡುವ ಮಾತಿನಲ್ಲಿ, ಬರವಣಿಗೆಯಲ್ಲಿ, ಮತ್ತೊಬ್ಬರಿಗೆ ತೋರಿಸುವ ಗೌರವದಲ್ಲಿ, ಸೌಜನ್ಯದಲ್ಲಿ, ಸಭ್ಯತೆಯಲ್ಲಿ, ವಿನಯದಲ್ಲಿ, ಪ್ರಾಮಾಣಿಕತೆಯಲ್ಲಿ ಕನ್ನಡವನ್ನು ಹೊರಸೂಸಲು ಸಾಧ್ಯವಿದೆ. ನಮ್ಮ ಇಡಿ ವ್ಯಕ್ತಿತ್ವವೇ ಒಂದು ಕನ್ನಡ ಪ್ರತಿನಿಧಿಯಾಗಿ ರೂಪಿಸಿಕೊಳ್ಳಲು ಸಾಧ್ಯವಿದೆ. ಈ ಪ್ರಯತ್ನಕ್ಕೆ ಆದರ್ಶದ ಬೆನ್ನು ಹತ್ತಬೇಕಿಲ್ಲ. ಪ್ರಚಾರ ಬೇಕಿಲ್ಲ. ದೇಣಿಗೆ ಸಂಗ್ರಹಿಸಬೇಕಿಲ್ಲ. 51 ನೇ ಕನ್ನಡ ರಾಜ್ಯೋತ್ಸವ ಅಂಥದೊಂದು ಚಿಂತನೆಯನ್ನು ನಮ್ಮಲ್ಲಿ ಹುಟ್ಟು ಹಾಕಿದರೆ ಈ ಆಚರಣೆ ಸಾರ್ಥಕ.
-ವಂದನೆ ಗಳು
ರಾಮ್
ಸಂಗ್ರಹ :ನೆಟ್